ಸೆಪ್ಟೆಂಬರ್ 20, 2024

ದಿನಾಂಕ:೩೦/೦೭/೨೦೨೩ ಸಮಯ: ರಾತ್ರಿ ೯ ರಿಂದ ೧೦ ಗಂಟೆ
ವಿಷಯ: ಪ್ರವಾಸ: ಒಂದು ಚಿಂತನೆ
ಕಾರ್ಯಕ್ರಮವನ್ನು ನಡೆಸಿಕೊಡುವವರು: ಶ್ರೀ ಮಂಜುನಾಥ್. ಡಿ.ಎಸ್.
ಪರಿಚಯ:

ಇವತ್ತಿನ ನಮ್ಮ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮವನ್ನು ನಡೆಸಿಕೊಡಲು ಆಗಮಿಸಿದವರು ಶ್ರೀ ಡಿ.ಎಸ್‌ ಮಂಜುನಾಥ್. ಬೆಂಗಳೂರಿನ ನಿವಾಸಿ. ಬಿಎಸ್ಸಿ, ಬಿ.ಇ, ಎಂ.ಬಿ.ಎ. ಪದವೀಧರರಾದ ಇವರು ವೃತ್ತಿಯಲ್ಲಿ ಕನ್ನಡಿಗರಲ್ಲ. ಉಕ್ಕು ಹಾಗೂ ಬಿಡಿಭಾಗಗಳ ತಯಾರಿಕಾ ಘಟಕಗಳ ವಿವಿಧ ಹುದ್ದೆಯಲ್ಲಿ ೪೪ ವರ್ಷಗಳ ಅನುಭವವಿರುವ ನಿವೃತ್ತ ಇಂಜಿನಿಯರ್‌. ಆದರೆ ಪ್ರವೃತ್ತಿಯಲ್ಲಿ, ಚಿಂತನೆಯಲ್ಲಿ ಕನ್ನಡಾಂಬೆಯ ವರಪುತ್ರರು. ಹಲವು ಸಾಹಿತ್ಯ ಮತ್ತು ಸಾಮಾಜಿಕ ಸಂಘಟನೆಗಳಲ್ಲಿ ಸದಸ್ಯರಾಗಿ ಸಕ್ರಿಯರಾಗಿದ್ದಾರೆ. ಸಾಹಿತ್ಯ, ಛಾಯಾಗ್ರಹಣ, ಕಲೋಪಾಸನೆ, ಪ್ರವಾಸ, ಬರವಣಿಗೆ ಮತ್ತು ಸಮಾಜಮುಖೀ ಚಟುವಟಿಕೆಗಳಲ್ಲಿ ಇವರಿಗೆ ತುಂಬ ಅಭಿರುಚಿಯಿದೆ. ಇವರು ಬರೆದ ಸುಮಾರು ನೂರೈವತ್ತಕ್ಕೂ ಹೆಚ್ಚು ಲೇಖನಗಳು ಸುಧಾ, ವಿಶ್ವವಾಣಿ, ತರಂಗ, ಕಸ್ತೂರಿ, ಸಮಾಜಮುಖಿ ಮುಂತಾದ ಪತ್ರಿಕೆಗಳಲ್ಲಿ ಪ್ರಕಟವಾಗಿ ಓದುಗರ ಅಭಿಮಾನ ಮತ್ತು ಮೆಚ್ಚುಗೆಯನ್ನು ಗಳಿಸಿವೆ.

ಕಳೆದ ವರ್ಷ ಪ್ರಕಟವಾದ ಇವರ ಪ್ರವಾಸಕಥನ ಕೊರಕಲಿನ ಜಾಡಿನಲ್ಲಿ ಎಂಬ ಕೃತಿ ಉತ್ತಮ ಪ್ರವಾಸಕಥನಕ್ಕೆ ಲಭಿಸುವ ಬಹುಮಾನವನ್ನೂ ಗಳಿಸಿದೆ. ಈಗ ಅವರ ಎರಡನೆಯ ಪ್ರವಾಸ ಸಂಕಲನ ಬೋಯಿಂಗ್‌ ಟೂರ್‌ ಮುದ್ರಣಗೊಳ್ಳುತ್ತಿದೆ. ತಾವು ನೋಡಿದ, ಕೇಳಿದ ಪ್ರವಾಸದ ಅನುಭವಗಳನ್ನು ಬಹು ಚೆನ್ನಾಗಿ ಬರೆಯುತ್ತಾರೆ. ಅಷ್ಟೇ ಉತ್ತಮವಾಗಿ ಅವುಗಳನ್ನು ಪ್ರಸ್ತುತಪಡಿಸುತ್ತಾರೆ ಕೂಡ. ನಮ್ಮ ಶಂಪಾ ಪ್ರತಿಷ್ಠಾನದ ಸದಸ್ಯರೂ ಆಗಿ ನಮ್ಮೆಲ್ಲ ಕಾರ್ಯಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು ವೈಯಕ್ತಿಕವಾಗಿಯೂ ನನಗೆ ಬಹಳ ಸಂತೋಷದ ವಿಷಯ. ಇದೀಗ ಅವರ ಪ್ರವಾಸದ ಅನುಭವ ಮತ್ತು ಅದನ್ನು ಕುರಿತು ಅವರ ಚಿಂತನೆಗಳೇನೆಂಬುದನ್ನು ತಿಳಿದುಕೊಳ್ಳೋಣ.

ಇವತ್ತು ಪ್ರಸ್ತುತ ಪಡಿಸಿದ ಪ್ರಬಂಧ:

ಮೀಟಿಂಗ್ ರೆಕಾರ್ಡಿಂಗ್ ಅನ್ನು ಆಲಿಸಿ:

ಹಂಚಿಕೊಳ್ಳಿ: https://shampa.org/8x85

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ